Thursday, July 9, 2009

"ದಿವ್ಯ" ತರಂಗಿಣಿ

  "ದಿವ್ಯ" ತರಂಗಿಣಿ 

ಹುಣ್ಣಿಮೆಯ ಚಂದ್ರನ ನೊಡಿ 
ಸಾಗರದ ಅಲೆಗಳ ತಲ್ಲಣ 
ಒಲವಿನ ಚೆಲುವೆಯ ಕುಡಿ ನೋಟಕೆ
ಮನಸಿನ ಭಾವನೆಗಳ ತಲ್ಲಣ

ಕೋಗಿಲೆಯ ಗಾನದ ಇಂಪಿಗೆ
ಚೈತ್ರದ ಹಸಿರೇ ಸ್ಪೂರ್ತಿ
ನನ್ನ ಸುಂದರ ನಾಳೆಗಳ ಕಲ್ಪನೆಗೆ 
ನಿನ್ನ ನೆನಪುಗಳೇ ಸ್ಪೂರ್ತಿ 

ಇಬ್ಬನಿಯಲಿ ಮಿಂದಿರುವ ಎಲೆಗೆ  
ಮುಂಜಾನೆ ಸೂರ್ಯನ ಕಿರಣವೇ ಮುಕ್ತಿ  
ಪ್ರೀತಿ ನಶೆಯಲಿ ತೇಲಾಡುವ ನನಗೆ
ನಿನ್ನ ಪ್ರೀತಿಯ ಸಮ್ಮತಿಯೇ ಮುಕ್ತಿ 

ಬಳಲಿದ ಮುಸ್ಸಂಜೆ ಸೂರ್ಯನಿಗೆ  
ತಾಯಿ ಮಡಿಲಲಿ ಐಕ್ಯದ ಬಯಕೆ 
ಇರುಳು ಬೆಳಕಲೂ ನಿನ್ನ ಚೆಲುವ 
ಕಾಂತಿಯನು ಮನಕೆ ನೋಡುವ ಬಯಕೆ

ಮಾನಸವಾಣಿಯಿಂದ,
-ಚಂದ್ರು 
csbyadgi@gmail.com








Tuesday, July 7, 2009

ಚಂದನದ ಗೊಂಬೆ

ಹೊಸದಾಗಿ ಆಫೀಸಿಗೆ ಬೊಗಸೆ ಕಣ್ಣಿನ, ಚೆಲುವೆಯೊಬ್ಬಳು ಹಂಸನಡಿಗೆಯನ್ನೂ ನಾಚಿಸುವಂತೆ, ಹಾಲುಗಲ್ಲದ, ಗುಳಿಕೆನ್ನೆಯ ನಗುವಿನಿಂದ, ನಾಗರ ಜಡೆಯಲಿ ಮಲ್ಲಿಗೆಯ ಹೂಮುಡಿದು , ಮಿಂಚಿನ ಬಳ್ಳಿಯಂತೆ, ಕೋಲ್ಮಿಂಚಿನ ನೋಟದಿಂದ ಒಳಬಂದಾಗ ನಮ್ಮ ನಿಮ್ಮೆಲ್ಲರ ಮನಸ್ಸಿನ ಮಾತುಗಳು, ತಳಮಳಗಳು, ಬಯಕೆಗಳು ಏನಿರಬಹುದು ????


"ಚಂದನದ ಗೊಂಬೆ"

ಯಾವ ಬತ್ತಿದ ಮನದ ಚಿಗುರಿಗೆ ನೀರೆರೆದು,
ಯಾರ ಸವಿಗನಸು ಈಡೆರಿಸುವ ಆಸೆಯಲಿ ಬಂದೆ ?

ಯಾವ ಸಹ್ಯಾದ್ರಿ ಮಲೆಯ ಚಂದನದ ಚೆಲುವ ತಳೆದು,
ಯಾರ ಬಾಳಪುಟದಲ್ಲಿ ಸುವಾಸನೆಯ ಕಂಪು ಸೂಸಲು ಬಂದೆ ?

ಯಾವ ಮಲೆನಾಡ ಹೆಣ್ಣ ಮೈಬಣ್ಣ ಹೊದ್ದು,
ಯಾರ ಕಣ್ಣ ಬಿಂಬ ತುಂಬಿ ನಿದ್ದೆಗೆಡಿಸಲು ಬಂದೆ ?

ಯಾವ ಶಿಲಾ ಬಾಲಕೆಯ ಚೆಲುವ ಮೈದಳೆದು,
ಯಾರ ಹರೆಯದ ಪ್ರಾಯಕೆ ಕಿಡಿ ಹೊತ್ತಿಸಲು ಬಂದೆ ?

ಯಾವ ಕವಿಗೆ ಕಾವ್ಯ ರಚಿಸುವ ಸ್ಪೂರ್ತಿ ಸೆಲೆಯಾಗಿ,
ಯಾರ ಕಿವಿಗೆ ಇಂಪನಿಡುವ ಮಾಧುರ್ಯದ ನುಡಿ ಸೂಸಲು ಬಂದೆ ?

ಯಾವ ಬಾಳದಾರಿಯಲಿ ಹಿತವಾಗಿ ಜೊತೆನಡೆದು,
ಯಾರ ಸವಿಬದುಕಲಿ ಸಂಗಾತಿಯಾಗುವ ಬಯಕೆ ಮೂಡಿಸಲು ಬಂದೆ ?

ಮಾನಸವಾಣಿಯಿಂದ:
-ಚಂದ್ರು
csbyadgi@gmail.com

sooryasta

sooryasta

Followers