Monday, August 3, 2009

ಧರ್ಮಾವಲೋಕನ

ಧರ್ಮಾವಲೋಕನ
ಧರ್ಮ ಎಂದರೇನು ?
ಮನುಷ್ಯನನ್ನು ಒಂದು ರಚನಾತ್ಮಕವಾದ ಕಟ್ಟಳೆಗೊಳಪಡಿಸಿ ಒಂದು ಸ್ವಾಸ್ಥ್ಯ, ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ನಡೆಸುವುದು, ಮತ್ತು ಅದಕ್ಕೆಂದೇ ನಾವು ಕೆಲವೊಂದು ರೀತಿ, ನೀತಿ ಗಳೆಂಬ ಲಕ್ಷ್ಮಣ ರೇಖೆ ಗಳನ್ನು ಹಾಕಿಕೊಳ್ಳುವುದು. ಆದರೆ ಇಂದಿನ ಯುವ ಜನಾಂಗ ಸ್ವಾತಂತ್ರ್ಯದ ಹೆಸರಿನಲ್ಲಿ ಆ ಕಟ್ಟಳೆಗಳನ್ನು ಗೌಣವಾಗಿಸಿದೆ, ದುರಂತವೆಂದರೆ ನಮ್ಮೆಲ್ಲರನ್ನು ಕಾಪಾಡಬೇಕಿದ್ದ ಧರ್ಮವೇ ತನ್ನ ಅಸ್ತಿತ್ವಕ್ಕಾಗಿ ಪ್ರಯತ್ನಿಸುತ್ತಿದೆ, ಹೆಣಗಾಡುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ ಧರ್ಮದ ಸ್ಥಿತಿ, ನೀರ ಸುಳಿಯಲ್ಲಿ ಸಿಕ್ಕು ಜೀವನ್ಮರಣದ ನಡುವೆ ಹೋರಾಡಿ, ವ್ಯರ್ಥವಾಗಿ ಮರಣಶಯ್ಯೆಯನ್ನು ನೆನೆದು ರೋದಿಸುತ್ತಾ ಚಡಪಡಿಸುತ್ತಿರುವ ಮನುಷ್ಯನ ಅವಸ್ಥೆಯಂತಾಗಿವೆ.

ನಮ್ಮ ಸನಾತನ ಧರ್ಮದ ಬಗ್ಗೆ ನಾವು ಕಿಂಚಿತ್ತಾದರೂ ಮುಂದಿನ ಪೀಳಿಗೆಗೆ ತಿಳಿಯಪಡಿಸಿದ್ದೇ ಆದರೆ, ಧರ್ಮಕ್ಕೆ ಇಂದು ಎದುರಾಗಿರುವ ಪರೀಸ್ಥಿತಿಯನ್ನು ಎದುರಿಸಬಹುದಿತ್ತು.ಧರ್ಮದ ಮೇಲಾಗುತ್ತಿರುವ ನಿರಂತರ ಅತ್ಯಾಚಾರವನ್ನು ತಡೆಯಬಹುದಿತ್ತು.

ಈ ಹೊತ್ತಿನಲ್ಲಿ ನಿಮಗೊಂದು ಪ್ರಾತ್ಯಕ್ಷಿಕೆ ಕೊಡಬೆಕೆಂದೆನಿಸುತ್ತಿದೆ :
ಈ ಕೆಳಗಿನ ರೀತಿಯ ಪಾಠಗಳನ್ನು ನಮ್ಮ ಘನ ಸರಕಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇಟ್ಟಿದೆ

ಡೆವಿಡ್ ಸ್ಟ್ಯಾನ್ಲಿ ಪೇಟೆಗೆ ಹೊಗುವಾಗ ದಾರಿಯಲ್ಲಿ ಅವನಿಗೆ ಪೀಟರ್ ಕ್ರಿಸ್ಟೊಫರ್ ಎಂಬ ತನ್ನ ಹಳೆಯ ಕಾಲದ ಮಿತ್ರ ಸಿಗುತ್ತಾನೆ... ಹೀಗೆ ಕಥೆ ಮುಂದುವರಿಯುತ್ತದೆ
ಕೊನೆಗೆ ಒಂದು ಪ್ರಶ್ನೆ : ಡೆವಿಡ್ ಪೇಟೆಗೆ ಹೋಗುವಾಗ ದಾರಿಯಲ್ಲಿ ಯಾರು ಸಿಗುತ್ತಾರೆ ?

ಇದೇ ಕಥೆಯನ್ನು :
ಲಕ್ಷ್ಮಣ ಪೇಟೆಗೆ ಹೊಗುವಾಗ ದಾರಿಯಲ್ಲಿ ಅವನಿಗೆ ಕೃಷ್ಣ ಎಂಬ ತನ್ನ ಹಳೆಯ ಕಾಲದ ಮಿತ್ರ ಸಿಗುತ್ತಾನೆ.. ಹೀಗೆ ಮುಂದುವರಿಸಿ
ಪ್ರಶ್ನೆ : ಲಕ್ಷ್ಮಣ ಹೋಗುವಾಗ ದಾರಿಯಲ್ಲಿ ಯಾರು ಸಿಗುತ್ತಾರೆ ?

ಎಂದು ಕೇಳಿದ್ದರೆ ಏನಾಗುತ್ತಿತ್ತು ? ಮಗುವಿನ ಕಲಿಕೆಗೂ ಇದು ಹತ್ತಿರವಿರುತ್ತಿತ್ತು. ಮೇಲ್ನೊಟಕ್ಕೆ ನಿಮಗೆ ಇದರಲ್ಲೇನಿದೆ ? ಎಂದು ಅನ್ನಿಸಬಹುದು ಆದರೆ ಎಲ್ಲ ಅಡಗಿರುವುದು ಈ ಹಂತದಿಂದಲೇ, ಇದೂ ಕೂಡ ಧರ್ಮದ ಮೇಲಿನ ಅತ್ಯಾಚರವೆಂಬ ವಿರಾಟ್ ರೂಪದ ಒಡಲ ಕುಡಿ, ವ್ಯವಸ್ಥಿತ ಸಂಚು, ಹೇಗೆಂದರೆ:

ಒಂದು ಮಗು ತನ್ನ ಪ್ರಾಥಮಿಕ ಹಂತವನ್ನು ಮೇಲಿನಂತೆ ಪೂರ್ಣಗೊಳಿಸುತ್ತದೆ, ಈ ಘಟ್ಟದಲ್ಲಿ ಮಗುವಿನ ಮನಸ್ಸು ಬಿಳಿ ಹಾಳೆಯಿದ್ದ ಹಾಗೆ ಅದರಲ್ಲಿ ನಾವು ಏನು ಬರೆಯುತ್ತೇವೆಯೋ ಅದೇ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮಾಧ್ಯಮಿಕ ಹಂತದ ವೇಳೆಗೆ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ,ಕೆಲಸದ ಒತ್ತಡ ದಲ್ಲಿ ಮಗುವಿನ ಓದಿಗೆ ಸಹಾಯ ಮಾಡಲು ಸಮಯ ಸಿಗುವುದಿಲ್ಲ ಎಂದು ಹುಸಿ ನೆಪ ಹೇಳಿ ಯಾವುದಾದರೂ ಬೋರ್ಡಿಂಗ್ ಶಾಲೆಗೆ ಸೇರಿಸುತ್ತೇವೆ, ಇನ್ನು ಕಾಲೇಜ್ ಮುಗಿದ ಮೇಲೆ ಜಾಗತಿಕರಣದ ಕಬಂಧ ಬಾಹುಗಳು ಅವನನ್ನು ಸೆಳೆದು ತನ್ನ ಕಪಿಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದು ಕೊಳ್ಳುತ್ತದೆ, ಮೆಟ್ರೊಪೊಲಿಟನ್ ಸಿಟಿ ಗಳಲ್ಲಿ ಜೀವನ ಪ್ರಾರಂಭ. ಇವನೇ ಮುಂದೆ ಧರ್ಮನಿರಪೇಕ್ಷರಿಗಳು ಎಂಬ ಮಹಾಸಂಸ್ಥಾನದ ಅಧಿಪತಿಯಾಗುತ್ತಾನೆ. ಸಲಿಂಗ ರತಿ ಯಂತಹ "ಸಂಕಟ" ಹರಿಯುವ ವ್ಯಾಧಿಗಳನ್ನು, ವಿಕೃತಿಗಳನ್ನು "ಸಂತೋಷ" ಕೊಡುವ ಆಯ್ಕೆಗಳೆಂದು ವಾದಿಸುತ್ತಾನೆ. ಸ್ವ್ಯಾತಂತ್ರಕ್ಕೂ ಸ್ವೆಚ್ಚೆಗೂ ವ್ಯತ್ಯಾಸ ಗೊತ್ತಿರದೇ ಮನುಷ್ಯ ಮೃಗದಂತಾಗುತ್ತಾನೆ.


ಇವೆಲ್ಲ ಅನಾರೋಗ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಶುರುವಾಗುತ್ತವೆ ಎಂದಾಯಿತು ಹಾಗಾದರೆ ಶಿಕ್ಷಣ ಎಂದರೇನು ?
ಜೀವನದಲ್ಲಿ ಅಂಧಕಾರವನ್ನು ಹೊಡೆದೋಡಿಸಿ ಜಾಗೃತಿಯ ಬೆಳಕನ್ನು ಹೊತ್ತಿಸುವುದು. ಅಂದರೆ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದು(ತಮಸೋಮ ಜ್ಯೋತಿರ್ಗಮಯ). ಸಮಾಜಕ್ಕೆ ಜಾವಾಬ್ದಾರಿಯುತ ವ್ಯಕ್ತಿಯನ್ನು ಕೊಡುವ ಜಾವಾಬ್ದಾರಿಯುತ ಕೆಲಸ. ಇಂತಹ ಅಮೃತವುಣಿಸುವ ಕೆಲಸವೇ ಇಂದು ನಮ್ಮನ್ನಾಳುವ ಕೋಡಗಗಳ ಒಣ ಪಿತೂರಿಗಳಲ್ಲಿ ಸಿಕ್ಕಿ ಸಮಾಜಮುಖಿಯಾಗಿರದೇ ಬರೀ ಡಿಗ್ರೀ ತೆಗೆದುಕೊಳ್ಳುವ ಒಂದು ಅರ್ಥಹೀನ ವ್ಯವಸ್ಥೆಯಾಗಿ ಗಬ್ಬೆದ್ದು ಹೋಗಿಬಿಟ್ಟಿದೆ. ಪುಸ್ತಕದಲ್ಲಿ ಒಂದು ದೇವರ/ವ್ಯಕ್ತಿಯ ಹೆಸರನ್ನು ಇಟ್ಟರೂ ಅನುಮಾನದಿಂದ ನೋಡಬೇಕಾಗಿದೆ. ಒಂದೊಂದು ಸರಕಾರ ಬಂದಾಗಲೂ ಪಠ್ಯ ಪುಸ್ತಕ ಪರಿಷ್ಕರಣೆಯಾಗುತ್ತಿರುತ್ತದೆ, ನೈಜ ಉದ್ದೇಶವೇ ಮರೆಯಾಗಿ ಒಳಸಂಚು ಆವರಿಸಿಕೊಂಡಿದೆ. ಶಿಸ್ತಿನ ಹೆಸರಿನಲ್ಲಿ ತಲೆಗೆ ಹೂಗಳನ್ನೂ, ಕೈಗೆ ಬಳೆಗಳನ್ನೂ, ಹಣೆಗೆ ಕುಂಕುಮವನ್ನೂ ಕೆಲವೊಂದು "ಶಾಂತಿಪ್ರಿಯ" ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ನಿಷೇಧಗೊಂಡಿವೆ. ಎಂದಿನಂತೆ ಸರಕಾರದ ನಡೆ ಮಾತ್ರ ಜಾಣ ಕುರುಡು, ಸೊಲ್ಲೆತ್ತಿದರೆ ನೀವು ಕೋಮುವಾದಿ. ಇಂದಿನ ಶಿಕ್ಷಣದಲ್ಲಿ ನಮ್ಮ ಶಾಲಾ ಜೀವನದ ಇಷ್ಟು ದಿನಗಳಿಂದ ಹಿಡಿದು ಇಂದಿನವರೆಗೆ ಯಾರಾದರೂ ಶಿಕ್ಷಣದ ಉದ್ದೆಶದ ಬಗ್ಗೆ ಯೋಚನೆ ಮಾಡಿದ್ದೆವೆಯೇ? ಇಲ್ಲ ಯಾಕೆಂದರೆ ಅದು ನಮ್ಮನ್ನು ಯೊಚನೆಗೊಳಪಡಿಸುವಷ್ಟು ಶಕ್ತಿಶಾಲಿ ಯಾಗಿ ಇರಲೇ ಇಲ್ಲ.

ಒಬ್ಬೊಬ್ಬ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಒಬ್ಬೊಬ್ಬ ದೇವರನ್ನು/ವ್ಯಕ್ತಿಯನ್ನು ರತ್ನಗಂಬಳಿ ಹಾಸಿ ಬರಮಾಡಿಕೊಳ್ಳುತ್ತವೆ, ಮತ್ತು ಆಯಾ ದೇವರ (ಧರ್ಮದ) ಪ್ರತಿಷ್ಠಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ ಯಾಕೆಂದರೆ ಹಾಗೆ ಮಾಡುವುದರಿಂದ ಅವರಿಗೆ ಹೇರಳ ವಾದ "ಪ್ರಸಾದ" ಪ್ರಾಪ್ತಿಯಾಗುತ್ತಿರುತ್ತದೆ. ಈ ಪ್ರಸಾದದ ಫಲವೇ ಪಠ್ಯ ಪುಸ್ತಕಗಳ ತಿರುಚುವಿಕೆ. ಅವುಗಳ ಫಲವಾಗಿಯೇ ದೆಶಭಕ್ತ ವೀರ್ ಸಾವರ್ಕರ್ ಕೆಲವರಿಗೆ ಭಯೋತ್ಪಾದಕನಾದ, ಸುಭಾಷ್ ಚಂದ್ರ ಬೋಸ್ ಹೇಡಿ ಎಂದು "ಎಡ"ತಳ್ಳಲ್ಪಟ್ಟರೆ, ಟಿಪ್ಪು ದೇಶಭಕ್ತನಲ್ಲ ಎಂದು ಕೆಲವರಿಂದ "ಬಲ"ತಳ್ಳಲ್ಪಟ್ಟ. ಎಸ್. ಎಲ್. ಬೈರಪ್ಪ ರಂತಹ ವಸ್ತುನಿಷ್ಠ ಕಾದಂಬರಿಕಾರರು ಕೋಮುವಾದಿಗಳಂತೆ ಕಂಡು ಅವಕೃಪೆಗೊಳಗಾದರು, ಮುಂದಿನ ದಿನಗಳಲ್ಲಿ ಇದು ವಿಪರೀತಕ್ಕೆ ಹೋದರೂ ಅಚ್ಚರಿಪಡಬೇಕಿಲ್ಲ.

ಹಾಗಾದರೆ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿರುವ ಆ ದೆವರು ಎಲ್ಲಿದ್ದಾನೆ ??
ಮಂದಿರ ? ಮಸೀದಿ ? ಮಠ ? ಚರ್ಚ್ ? ತೀರ್ಥಕ್ಷೆತ್ರ ? ಬೆಟ್ಟ ? ಬಯಲು ? ಎಲ್ಲೂ ಇಲ್ಲ. ಹೋಗಿ ನೋಡಿ ಬಡವರ ಗುಡಿಸಲಲ್ಲಿದ್ದಾನೆ, ದೀನರ ದಲಿತರ ಹೃದಯದಲ್ಲಿದಾನೆ, ದುಃಖಿತರ ಆರ್ತಧ್ವನಿಯಲ್ಲಿದ್ದಾನೆ, ಬೇರೆಯವರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ/ಕನಿಕರಪಡುವವರ ಕರುಳಲ್ಲಿದ್ದಾನೆ. ಇಂದಿನ ಯಾವ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಪ್ರಾಮಾಣಿಕ ಕಳಕಳಿಯಿಂದ ಹೇಳಿಕೊಟ್ಟಿದ್ದಾರೆ ? ಎಲ್ಲೂ ಇಲ್ಲ. ಮಾನವನ ಬದುಕಿನ ಬಹುದೊಡ್ಡ ದುರಂತವೇನು ಗೊತ್ತೆ ? ಅವನು ಚಂದ್ರಲೋಕಕ್ಕೆ ಹೋಗಿಬಂದಿದ್ದಾನೆ, ಆದರೆ ಅಕ್ಕ-ಪಕ್ಕದ ಮನೆಯವರನ್ನು ಅರಿಯಲು ಮರೆತಿದ್ದಾನೆ, ನೆರೆ ಹೊರೆಯವರ ಬದುಕಿಗೆ ಸ್ಪಂದಿಸುವುದನ್ನೇ ಮರೆತಿದ್ದಾನೆ ..

ಸರಿರಾತ್ರಿಯವರೆಗೂ ಪಬ್ ಗಳಿಗೆ ಅನುಮತಿ ಕೊಡಿ ಎಂದೂ, ಸಲಿಂಗ ರತಿಯನ್ನು ಕಾನೂನಿಕರಣ ಗೊಳಿಸಿ ಎಂದೂ ಘನಾಂದಾರಿ ಹೋರಾಟ ಮಾಡುತ್ತಿರುವ ಮುಕುಟಮಣಿಗಳನ್ನು ಬೇಕಾದರೆ ಹೋಗಿಕೇಳಿ, ಅವರಲ್ಲಿ ಒಬ್ಬ ಬಾಜೀರಾಯ(ಯ್ತಿ) ನಾದರೂ ತುಂಬಿದ ಮನೆಯಲ್ಲಿ ಬೆಳೆದು ಬಂದಿದ್ದಾರೆಯೇ ಎಂದು,ಅವರಪ್ಪನಾಣೆಗೂ ಯಾರೂ ಇರುವುದಿಲ್ಲ, ಎಲ್ಲರೂ ಸಮಯ ಕಳೆಯಲಿಕ್ಕೆ ತಮ್ಮ ನಾಯಿಗಳು, ಟೆಡ್ಡಿ ಬೆರ್ ಗಳನ್ನು ನೆಚ್ಚಿಕೊಂಡವರೆ. ಅದಕ್ಕೇ ಅವರಿಗೆ "ಸಮಯ" ಕಳೆಯಲಿಕ್ಕೆ ಯಾರಾದರೇನು ಎಂಬ ವಿಕೃತ ವಿಚಾರ ಎಲ್ಲಿಂದಲೋ (ತಲೆಯಿಂದಂತೂ ಬರಲು ಸಾಧ್ಯವಿಲ್ಲ ಬಿಡಿ) ಬಂದು ಬಿಟ್ಟಿದೆ. ಊಹುಂ .. ಅವರಿಗೆ ಅನುಕರಣೆಗೆ ಪಾಶ್ಚಾತ್ಯರೇ ಆಗಬೇಕು, ನಮಗೆ ದೇವರ ವಿಗ್ರಹ ತೊಳೆದ ನೀರು ಮತ್ತು ಕಲ್ಪವೃಕ್ಷ ತೆಂಗಿನ ನೀರು ತೀರ್ಥವಾದರೆ, ಅವರಿಗೆ ಪಾಶ್ಚ್ಯಾತ್ಯರ ಮೂತ್ರವೇ ತೀರ್ಥವೆನ್ನುವಷ್ಟರ ಮಟ್ಟಿಗೆ ಅವರು ಪಾಶ್ಚ್ಯಾತ್ಯರನ್ನು ಅನುಕರಿಸುತ್ತಾರೆ.ಎಲ್ಲರೂ ಧರ್ಮ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದೇ ತಿಳಿದಿದ್ದಾರೆ, ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಧರ್ಮವೆಂಬ ವಿಶಾಲ ಆಲದ ಮರದ ಬೇರುಗಳನ್ನು ನಾವೆಷ್ಟು ಸಡಿಲಿಸುತ್ತಿದ್ದೇವೆ, ತನ್ಮೂಲಕ ಎಂತಹ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ ಎಂದು ವಿಚಾರಿಸುವ ವ್ಯವಧಾನ ಮಾತ್ರ ಯಾರಿಗೂ ಇಲ್ಲ(ನೆನಪಿರಲಿ: ನೀವು ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಿಮ್ಮನ್ನು ರಕ್ಷಿಸುತ್ತದೆ).

ಜನ್ಮದಿನದಂದು, ಗೆಳೆಯರ ದಿನದಂದು ಹಾಗು ಮುಂತಾದ ದಿನಗಳಂದು ಹಾರೈಕೆಗೆಂದು ಪುಟಗಟ್ಟಲೇ ಮೆಸ್ಸೆಜ್ ಗಳನ್ನೂ, ಆರ್ಕುಟ್ ನಲ್ಲಿ ಸ್ಕ್ರ್ಯಾಪ್ ಗಳನ್ನೂ, ಮೇಲ್ ಗಳನ್ನೂ ಕಳಿಸುವ ನಾವು, ಎದುರಿಗೆ ಸಿಕ್ಕಾಗ ಒಂದು ಪ್ರೀತಿ ತುಂಬಿದ ನಗುವನ್ನೂ, ವಾತ್ಸಲ್ಯದ ಮಾತನ್ನೂ ಆಡದೇ ಜನ್ಮಾಂತರದ ಶತ್ರುಗಳಿದ್ದಂತೆ ಇರುತ್ತೇವೆ. ಅಷ್ಟರಮಟ್ಟಿಗೆ ಯಾಂತ್ರಿಕವಾಗಿ ಬಿಟ್ಟಿದ್ದೇವೆ ನಾವು. ಊಟದ ಹೊತ್ತಿನಲ್ಲಿ ಪರಸ್ಥಳದ ಅನಾಮಿಕನೊಬ್ಬ ಎದುರಾದರೆ ಕುಶಲ ಸಮಾಚಾರ ವಿಚಾರಿಸಿ ಕೈಲಿದ್ದ ತಟ್ಟೆಯನ್ನು ಅತಿಥಿ ಗಳಿಗೆ ಸತ್ಕರಿಸಿ ಉಪಚರಿಸುವ ಸಂಸ್ಕೃತಿ ನಮ್ಮದು. ಅವರ ಸಂತೃಪ್ತಿಯಲ್ಲೇ ನಮ್ಮ ಸಮಾಧಾನ. ನಮ್ಮ ಹಿರಿಯರ ಈ ಆಚರಣೆಗಳೇ ಅವರನ್ನು ಅಷ್ಟೊಂದು ಪ್ರಭುದ್ಧರನ್ನಾಗಿ ಮಾಡಿರುವುದು ಮತ್ತು ಆರೋಗ್ಯಕರ ವಿಚಾರಗಳಿಂದಲೇ ಅಷ್ಟೊಂದು ದೀರ್ಘಾಯುಷಿ ಗಳಾಗಿರುವುದು.

ಹಿಡಿಮುಷ್ಠಿಯಷ್ಟಿರುವ ಹೃದಯದಲ್ಲಿ ಸಾಸಿವೆಯಷ್ಟಾದರೂ ನಮಗೆ ನಮ್ಮ ಸಂಸ್ಕ್ರುತಿಯ ಬಗ್ಗೆ ಗೌರವ ವಿರಬಾರದೆ ?? ಭವ್ಯ ಭಾರತದಲ್ಲಿಯ ಭವಿಷ್ಯದ ಪೀಳಿಗೆಯನ್ನು ನೆನೆದರೆ ನಿಜಕ್ಕೂ ಕಣ್ಣು ಕತ್ತಲು ಗುಡಿಸದಂತಾಗುತ್ತದೆ. ಪರೀಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯ ಅದೇ ಪಠ್ಯ ಪುಸ್ತಕದಲ್ಲಿ ಒಂದು ಪ್ರಶ್ನೆ ಯಿರುತ್ತದೆ,
ಭಾರತದಲ್ಲಿ ಇತ್ತೀಚೆಗೆ ನಾಮಾವಶೇಶ ಗೊಂಡ ಧರ್ಮ ಯಾವುದು ??

ಉತ್ತರಿಸಲು ನಾವಿರುವುದಿಲ್ಲ ನಿಜ, ಆದರೆ ಆ ಪ್ರಶ್ನೆಗೆ ಕಾರಣೀಭೂತರು ಮಾತ್ರ ನಾವೆ...

ನಾನು ಉಲ್ಲೇಖಿಸಿರುವ ಕೆಲವೊಂದು ಮಾತುಗಳು ನಿಮಗೆ ಅಪ್ರಭುದ್ಧವೆಂದೂ, ಸಿನಿಕತನವೆಂದೂ ಗೋಚರಿಸಬಹುದು, ಗೋಚರಿಸುತ್ತವೆ ಕೂಡ ಯಾಕೆಂದರೆ ನಮ್ಮದೂ ಯುವ-ಪೀಳಿಗೆಯೇ ಅಲ್ಲವೇ ?? ವರ್ತಮಾನದ ಹಂಗಿನಲ್ಲಿ ಮಾತ್ರ ಹಾರಬಯಸುವ ಹಕ್ಕಿಗಳು ನಾವು...ಭವಿಷ್ಯವನ್ನು ಪಾಪಪ್ರಜ್ನೆಗೆ ಮೀಸಲಿಡೋಣ ಬಿಡಿ.

ಮಾನಸವಾಣಿಯಿಂದ
-ಚಂದ್ರು
csbyadgi@gmail.com

4 comments:

  1. ಚೂಪಾಗಿ ಒಳ್ಳೆ ಬೇಟೆಯಾಡುವ ಬರ್ಚಿಯಂತಿದೆ. ಕಾವೇರಿದ ಕಬ್ಬಣದಂತಿದೆ…
    ಆದರೆ ಇಂತಹ ಬರಹಗಳು ಮುದುಡಿ ಮುಕ್ಕರಿಸಿರುವ ನಮ್ಮ ಹರೆಯದ ಎದೆಯೋಳಗೆ ನಾಟುವಂತೆ ಮಾಡುವ ಕೆಲಸ ಇನ್ನೂ ಜೋರಾಗಿ ಮಾಡಬೇಕಿದೆ.
    ಒಳ್ಳೆಯ ಗಡುಸು ಇದೆ ಬರಹದಲ್ಲಿ ಮುಂದುವರೆಸು…

    ಒಂದು ಒರೆ(ಪದ) ತಪ್ಪು ಸಿಕ್ಕಿತು ಕದಂಬ ಅಲ್ಲ ಕಬಂದ

    ReplyDelete
  2. Hi Chandru,

    this article is really thought provoking and I cant resist commenting on this.(kshamisi, kannadadalle nanna uttara neeDabEkendidde, aadare nanna gaNaka yantradalli adu saadhtavaaguttilla..)

    I guess, the definition of religion, that u have given is appropriate if not correct. Religion sets guidelines for a social as well as a personal well being. But, how far or how much have we understood religion.. or our religion atleast..

    Who made religions.? Man.. correct.. (why not a woman.?)correction, human beings made religions.. when they set out the guidelines, was it for the well being of all.. (when I say all, it even includes other living beings..) I guess, yes..

    then why India has witnessed some cruel rituals like "the SATI System" per say.. or why "caste system " which still prevails like a phantom-menace.. I think, this is because we lack or our knowledge regarding religions is limited. And religions have been manipulated for various 'self interests' of people..
    If we 'see', the essence of every religion on earth(atleast), it boils down to a simple act.. " Do not do it to others, that which hurts if done to u.."

    now, coming to the point u raised regarding gay sex, I beg to differ.. just because I am straight(sexual orientation), and u r straight(just a guess)and we form the majority, it will be wrong on our part to say gay sex is obscene or anti-social. even the people belonging to 'sexual minority'(if I am using the right word)r human beings and they have the rights.. right.!?

    even with our limited knowledge, we can discuss/argue on this topics for days together.. but, i feel this is not the right forum..

    and ya, i like ur usage of words to support ur thoughts.. my vocabulary is improving.. good going Chandru..

    ReplyDelete
  3. Chandru,

    I believe the defintion of religion given by is is incorrect...

    The above defintion given by u is more appropriate to define "Culture" than "Religion"

    ReplyDelete
  4. ಜಾಗತೀಕರಣದ ಪರ/ವಿರೋಧ ಲೇಖನಗಳು ನಿನ್ನ ಮನಸ್ಸಿನ ವಿಚಾರವನ್ನು ಸೂಸುತ್ತವೆ... ಒಂಡೆದೆ, ಜಾಗತೀಕರಣದ ಫಲಾನುಭವಿಯಾಗಿ ಅದರ ಸವಲತ್ತುಗಳನ್ನು ಆಸ್ವಾದಿಸಬೇಕೆಂದು ಮನಸ್ಸು ಹಾತೊರೆಯುತ್ತಿದ್ದರೆ, ಅದೇ ಜಾಗತೀಕರಣದಿಂದ ಕೆಲವೊಂದು ಮೌಲ್ಯಗಳು ನಶಿಸುತ್ತಿವೆ ಎಂದು ದುಃಖಿಸುತ್ತಿರುವ ಮನಸ್ಸು ಮತ್ತೊಂದೆಡೆ...Panduan Cara Menginstall Windows 7 dengan Flashdis ಒಂದೇ ವಿಚಾರದ ಬಗ್ಗೆ ಪರೆ/ವಿರೋಧ ಯೋಚನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ.. ಅದರಲ್ಲೂ ತನ್ನ ಒಳಿತಿಗಿಂತ ದೇಶದ ಒಳಿತು / ಪರರ ಒಳಿತು ಮೊದಲು ಎಂದು ತಿಳಿದಿರುವ ನಿನ್ನಂತ ಯುವಕರಲ್ಲಿ ಸಾಮಾನ್ಯ... ಆದರೆ ಸಧ್ಯಕ್ಕೆ ನಮ್ಮ ದೇಶಕ್ಕೆ (ಹಾಗು ನಮಗೂ) ಬೇಕಾಗಿರುವುದು ಆರ್ಥಿಕ ಸುಧಾರಣೆ ಹಾಗು ಜೀವನ ಮೌಲ್ಯಗಳ ಉಳಿವಿಕೆ... ಆರ್ಥಿಕ ಸುಧಾರಣೆ ಜಾಗತೀಕರಣದ ಕೈಲಿದ್ದರೆ, ಮೌಲ್ಯಗಳ ಉಳಿವಿಕೆ ನಮ್ಮ ಕೈಲಿದೆ... ನಮ್ಮಿಂದ ಎನಾಗುತ್ತೋ ಅದನ್ನ ಉಳಿಸಿಕೊಳ್ಳೋಣ ....

    ReplyDelete

sooryasta

sooryasta

Followers